Home » News » ಕನ್ನಡ ನಾಡಿನ ಅಭ್ಯುದಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ. ಶ್ರೀ ವಿರೇಶ ಜಂಬಗಿ

ಕನ್ನಡ ನಾಡಿನ ಅಭ್ಯುದಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ. ಶ್ರೀ ವಿರೇಶ ಜಂಬಗಿ

WhatsApp Group Join Now
Telegram Group Join Now

ರಾಣಿಬೆನ್ನೂರು : ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆ ಉಳಿವಿಗೆ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕೊಡುಗೆ ಅಪಾರವಾಗಿದೆ  ಎಂದು ತಾಲೂಕ ಕಸಾಪ ಅಧ್ಯಕ್ಷ ಶ್ರೀ ವೀರೇಶ್ ಜಂಬಗಿ ಹೇಳಿದರು.

ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ  ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಜಕೀಯವಾಗಿ ,ಆಡಳಿತಾತ್ಮಕವಾಗಿ ಹಲವು ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಗ್ಗೂಡಿಸಿ ಕನ್ನಡ ಭಾಷೆ , ಸಾಹಿತ್ಯ ,ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಮೇ  .5. 1915 ರಂದು ಸ್ಥಾಪಿಸಿದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕೆಗಳು, ವಯಸ್ಕರ ಶಿಕ್ಷಣ, ಮೀಸಲಾತಿ ಹೀಗೆ ಹಲವು ಜನಪರ ಕಾರ್ಯಗಳ ಮೂಲಕ ನಾಡಿನ ಅಭ್ಯುದಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಡಾ. ಕೆ. ಎಚ್. ಮುಕ್ಕಣ್ಣನವರ, ಶ್ರೀ ಪ್ರಭಾಕರ ಶಿಗ್ಲಿ, ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಎ ಬಿ ರತ್ನಮ್ಮ,  ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಶ್ರೀ ಮಾರುತಿ ತಳವಾರ,

ಗೌರವ ಕೋಶಾಧ್ಯಕ್ಷ ಶ್ರೀ ಎಸ್. ಎಚ್.ಮುದಿಗೌಡರ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಶ್ರೀ ಜಗದೀಶ್ ಮಳಿಮಠ ನಿರೂಪಿಸಿದರು ಶ್ರೀ ಚಂದ್ರಶೇಖರ್ ಮಡಿವಾಳರ ವಂದಿಸಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *