Home » Political News » ಕುರುಬರು  ಈ ಬಾರಿ ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ

ಕುರುಬರು  ಈ ಬಾರಿ ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ

WhatsApp Group Join Now
Telegram Group Join Now

ದಾವಣಗೆರೆ: ರಾಜ್ಯದ ಯಾವೊಬ್ಬ ಕುರುಬರು  ಈ ಬಾರಿ ಬಿಜೆಪಿಗೆ ಮತ ಹಾಕಿ ಮೋಸ ಹೋಗಬೇಡಿ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಲೋಕಸಭಾ ಚುನಾವಣೆಯ ಪ್ರಚಾರ ನಿಮಿತ್ತ ದಾವಣಗೆರೆ ನಗರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರ ಪ್ರಚಾರದ ಅಂಗವಾಗಿ ಏರ್ಪಡಿಸಿದ್ದ ಪ್ರಜಾಧ್ವನಿ ಜನಸಮಾವೇಷವನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿಯವರು ಕುರುಬ ಸಮುದಾಯದ ಸಂಕೇತವಾದ ಕರಿ ಕಂಬಳಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಯಾಮಾರಿಸುತ್ತಿದ್ದಾರೆ.

ಕುರುಬರು ಇದಕ್ಕೆ ಮರುಳಾಗಬೇಡಿ. ರಾಜ್ಯದ ಜನಸಂಖ್ಯೆಯಲ್ಲಿ 7% ಜನಸಂಖ್ಯೆ ಹೊಂದಿರುವ ಹಾಲುಮತ ಕುರುಬ ಸಮುದಾಯಕ್ಕೆ  ಬಿಜೆಪಿ ಪಕ್ಷ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ ನಿಮಗೆ ಆಕ್ರೋಶ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯದ ಪರವಾಗಿ,ದಾವಣಗೆರೆ ಜಿಲ್ಲೆಯ ಜನರ ಪರವಾಗಿ  ಬಿಜೆಪಿ ಸಂಸದ ಸಿದ್ದೇಶ್ವರ  ಸಂಸತ್ ನಲ್ಲಿ ಧ್ವನಿ ಎತ್ತಲಿಲ್ಲ. ನಮ್ಮ ರಾಜ್ಯಕ್ಕೆ  ಬಿಜೆಪಿ ಸರ್ಕಾರ ಆರ್ಥಿಕವಾಗಿ  ತೀವ್ರ ಅನ್ಯಾಯ ಮಾಡಿತು, ಎಂದು ಆರೋಪಿಸಿದರು.

ಬಿಜೆಪಿ ಪಕ್ಷ ಈಗಾಗಲೇ ಸೋತಾಗಿದೆ,ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ, ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *