Home » Govt Schemes » ಕೇಂದ್ರದ ಈ ಹೊಸ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಜೊತೆ 15,000/- ಉಚಿತ ಪಡೆಯಿರಿ

ಕೇಂದ್ರದ ಈ ಹೊಸ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ಜೊತೆ 15,000/- ಉಚಿತ ಪಡೆಯಿರಿ

WhatsApp Group Join Now
Telegram Group Join Now

ಆತ್ಮೀಯರೇ ಸ್ವಯಂ ಉದ್ಯೋಗ ಕೈಗೊಳ್ಳಲಿಚ್ಚಿಸುವವರಿಗೆ ಭಾರತ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ 2024 ಹಲವು ರೀತಿಯ ಸೌಲಭ್ಯಗಳ ನೀಡುತ್ತಿದೆ

ಪಿಎಂ ವಿಶ್ವಕರ್ಮ ಯೋಜನೆಯ ಮುಖಾಂತರ ಸಂಬಂಧಪಟ್ಟ ಉದ್ಯೋಗದ ಕುರಿತು ತರಬೇತಿಯೊಂದಿಗೆ ಹದಿನೈದು ಸಾವಿರ ರೂಪಾಯಿ ಹಣವನ್ನು ಕೂಡ ಪಡೆಯಬಹುದು ತರಬೇತಿ ಸಮಯದಲ್ಲಿ ಪ್ರತಿನಿತ್ಯ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗೆ ತಲಾ 500 ಗಳನ್ನು ಭತ್ಯೆಯಾಗಿ ನೀಡುತ್ತದೆ

ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆದು ಉದ್ಯಮ ಪ್ರಾರಂಭಿಸುವವರಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಸರ್ಕಾರ ಮಾಡಿಕೊಡುತ್ತದೆ.
ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಅವಕಾಶವಿದೆ.

ಪಿಎಂ ವಿಶ್ವಕರ್ಮ ಯೋಜನೆ ಎಂಬುದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಪ್ರಾರಂಭಿಸಿರುವ ಕೇಂದ್ರ ವಲಯದ ಯೋಜನೆ,

ಕುಶಲಕರ್ಮಿಗಳಿಗೆ ಬೇಕಾದ ಕೌಶಲ್ಯ ತರಬೇತಿ. ಸಾಲ ಸೌಲಭ್ಯ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದ ಕುರಿತು ಮಾಹಿತಿ ಒದಗಿಸಿ ಪ್ರೋತ್ಸಾಹಿಸುವ ಯೋಜನೆಯಾಗಿದೆ.

ಸಾಂಪ್ರದಾಯಿಕ ಉಪಕರಣಗಳು ಗೃಹ ಕೈಗಾರಿಕೆ ಹಾಗೂ ಮಾನವ ಶ್ರಮದಿಂದ ಕೈಗಳ ಉಪಕರಣಗಳೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಸಹಾಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ

ಯೋಜನೆಯ ಪ್ರಯೋಜನಗಳು.

ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ಕುಶಲಕರ್ಮಿಗಳಿಗೆ ಹಲವು ರೀತಿಯ ಸಹಾಯವನ್ನು ಒದಗಿಸಲಾಗುತ್ತದೆ.

ಕೌಶಲ್ಯ ತರಬೇತಿ.

5 ರಿಂದ 7 ದಿನಗಳ ಆ ಅವಶ್ಯಕತೆ ಹಾಗೂ 15 ದಿನ ಅಥವಾ ಹೆಚ್ಚಿನ ತರಬೇತಿಯನ್ನು ದಿನಕ್ಕೆ 500 ಗಳಂತೆ ಬತ್ತೆ ನೀಡಿ ತರಬೇತಿ ನೀಡಲಾಗುವುದು.

ಸಾಲ ಸೌಲಭ್ಯ.

ಈ ಯೋಜನೆ ಅಡಿಯಲ್ಲಿ ಕುಶಲಕರ್ಮಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಯನ್ನು ಮಾಡಲಾಗುವುದು 18 ತಿಂಗಳು ಮತ್ತು 30 ತಿಂಗಳ ಅವಧಿಗೆ ಕ್ರಮವಾಗಿ 1 ಲಕ್ಷ ಮತ್ತು 2 ಲಕ್ಷದ ಎರಡು ಕಂತಿನಲ್ಲಿ
3ಮೂರು ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ .ಇದನ್ನು ಭಾರತ ಸರ್ಕಾರವು 8% ಸ್ಥಿರ ರಿಯಾಯಿತಿ ಬಡ್ಡಿ ದರದಲ್ಲಿ ಒದಗಿಸುತ್ತದೆ.

ಟೂಲ್ ಕಿಟ್ ನೆರವು.

ತರಬೇತಿ ಆರಂಭದಲ್ಲಿ ಈ ವೋಚರ್ನಂತೆ 15,000 ರವರಿಗೆ ಟೂಲ್ ಕಿಟ್ ಪ್ರೋತ್ಸಾಹ ನೆರವನ್ನು ನೀಡುತ್ತದೆ.

ಪ್ರಮಾಣ ಪತ್ರ.

ಕೌಶಲ್ಯ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯೊಂದಿಗೆ ಪ್ರತ್ಯೇಕವಾಗಿ ಅವರನ್ನು ಗುರುತಿಸುವ ವ್ಯವಸ್ಥೆ ಮಾಡಿರುತ್ತದೆ.

ಅರ್ಹತೆ.

ಸಾಂಪ್ರದಾಯಿಕ ಉದ್ಯೋಗಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಯೋಜನೆ ಪ್ರಯೋಜನವನ್ನು ಪಡೆಯಬಹುದು

ಅಭ್ಯರ್ಥಿಯು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.

ಮುದ್ರಾ ಮತ್ತು ಸ್ವಾನಿಧಿ ಫಲಾನುಭವಿಗಳನ್ನು ಹೊರತುಪಡಿಸಿ ಯಾವುದೇ ಬ್ಯಾಂಕ್ ನ ಸಾಲದ ಸಂಪೂರ್ಣ ಬಾಕಿಧಾರರಾಗಿರಬಾರದು

ಈ ಯೋಜನೆ ಪ್ರಯೋಜನವನ್ನು ಪ್ರತಿ ಕುಟುಂಬದ ಒಬ್ಬ ಸದಸ್ಯರು ಮಾತ್ರ ಪಡೆಯಬಹುದು.

ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಈ ಯೋಜನೆಗೆ ಅರ್ಹರಲ್ಲ.

ನೊಂದಾವಣಿಗೆ ಬೇಕಾದ ದಾಖಲೆಗಳು.

ಅರ್ಜಿದಾರ ಆಧಾರ್ ಕಾರ್ಡ್

ನಿವಾಸ ಪ್ರಮಾಣ ಪತ್ರ

ಮೊಬೈಲ್ ನಂಬರ್

ಬ್ಯಾಂಕ್ ಪಾಸ್ ಬುಕ್

ಪಾಸ್ಪೋರ್ಟ್ ಸೈಜ್ ಫೋಟೋ

ಪಡಿತರ ಚೀಟಿ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ.

ಮೊದಲಿಗೆ ಪಿ. ಎಂ. ವಿಶ್ವಕರ್ಮ ಯೋಜನೆಯ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ https://pmvishwakarma.gov.in/ ವೆಬ್ ಪೇಜ್ ತೆರೆದ ಬಳಿಕ ಲಾಗಿನ್ ಆಗಬೇಕು
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ. ಲಾಗಿನ್ ಆದ ಬಳಿಕ ಎಲ್ಲಾ ದಾಖಲಾತಿಗಳೊಂದಿಗೆ ಟೂಲ್ ಕಿಟ್ ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *