Home » News » ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್. ಡಿಎ ಹೆಚ್ಚಳದ ಬೆನ್ನಲ್ಲೇ ವಿವಿಧ ಭತ್ಯೆ ಹೆಚ್ಚಳ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್. ಡಿಎ ಹೆಚ್ಚಳದ ಬೆನ್ನಲ್ಲೇ ವಿವಿಧ ಭತ್ಯೆ ಹೆಚ್ಚಳ

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಶುಭ ಸುದ್ದಿಯನ್ನು ನೀಡಿದೆ.

ಕಳೆದ ಕಳೆದ ಮಾರ್ಚ್ ನಲ್ಲಿ 4% ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಮತ್ತೆ ಸರ್ಕಾರಿ ನೌಕರರಿಗೆ ವಿವಿಧ ಭತ್ಯೆಗಳನ್ನು ಶೇಕಡ 25 ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸರ್ಕಾರಿ ನೌಕರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳು ಶಿಕ್ಷಣ ಭತ್ಯೆ. ಹಾಸ್ಟಲ್ ಸಬ್ಸಿಡಿ ಮುಂತಾದ ಸವಲತ್ತುಗಳು ದೊರೆಯುತ್ತವೆ

ನೌಕರರ ನಿವೃತ್ತಿ ಗ್ರಾಚ್ಯುಟಿ ಮೊತ್ತ ಶೇಕಡಾ 20 ರಷ್ಟು ಏರಿಕೆಯಾದ ಕಾರಣ ನಿವೃತ್ತಿ ಗ್ರಾಚ್ಯುಟಿ ಫಂಡ್ 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ.

ಶೇಕಡ 4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಿರುವುದರಿಂದ ಸರ್ಕಾರಿ ನೌಕರರು ಪಡೆಯುತ್ತಿರುವ ಒಟ್ಟಾರೆ ತುಟ್ಟಿ ಭತ್ಯೆ ಪ್ರಮಾಣ ಶೇಕಡ 50 ದಾಟಿದ ಹಿನ್ನೆಲೆಯಲ್ಲಿ ಎಲ್ಲಾ ಭತ್ಯೆಗಳು ಏರಿಕೆ ಯಾಗುತ್ತವೆ ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಏರಿಕೆಯಾಗಲಿದೆ

ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ಸಚಿವಾಲಯವು ಏಪ್ರಿಲ್ 2024 ರಂದು ಹೊರಡಿಸಿದ ಜ್ಞಾಪನದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಮಕ್ಕಳ ಶಿಕ್ಷಣ ಭತ್ಯೆ. ಹಾಸ್ಟೆಲ್ ಸಬ್ಸಿಡಿ ಮಕ್ಕಳ ಶೈಕ್ಷಣಿಕ ವಿಚಾರವಾಗಿ ಹಲವಾರು ಮಾಹಿತಿಗಳನ್ನು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಹಿಂದೆ ಪಡೆದಿತ್ತು 2024 ಜನವರಿ 1 ರಿಂದ ಜಾರಿಗೆ ಬರುವಂತೆ ಶೇಕಡ 50ರಷ್ಟು
ಡಿ ಎ ಯನ್ನು ಕೇಂದ್ರ ಸರ್ಕಾರ ನೌಕರರಿಗೆ ಹೆಚ್ಚಳ ಮಾಡಲಾಗಿತ್ತು

ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆ ಹೆಚ್ಚಳವಾಗುವುದರರಿಂದಾಗಿ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಾದ ಶಿಕ್ಷಣ ಭತ್ಯೆ ಹಾಸ್ಟೆಲ್ ಸಬ್ಸಿಡಿ ಕೂಡ ಹೆಚ್ಚಳವಾಗುತ್ತದೆ ಈ ಕುರಿತು ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲಿ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ಮೊತ್ತ 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಏರಿಕೆಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *