Home » mobiles » 108MP ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಐಟೆಲ್​ 5G ಮೊಬೈಲ್.

108MP ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಐಟೆಲ್​ 5G ಮೊಬೈಲ್.

WhatsApp Group Join Now
Telegram Group Join Now

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು  ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಳ್ಳುತ್ತಿದೆ. ಇದು ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೀಗ ಮಾರುಕಟ್ಟೆಯಲ್ಲಿ ಮದ್ಯಮ ಶ್ರೇಣಿಯ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಮತ್ತು ಸ್ಮಾರ್ಟ್ ಫೋನ್ ಪ್ರಿಯರಿಗೆ ಒಂದು ಹೊಸ ಸುದ್ದಿ ಬಂದಿದೆ.

ಹೌದು, ಇದೀಗ Itel ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ S-ಸರಣಿ ಸ್ಮಾರ್ಟ್‌ಫೋನ್(Itel S series smart phone) ಅನ್ನು ಬಿಡುಗಡೆ ಮಾಡಿದೆ (Launched). ಅದುವೇ itel S24 ಸ್ಮಾರ್ಟ್ ಫೋನ್(Itel S24 smartphone). ಇತ್ತೀಚಿನ itel S-ಸರಣಿಯ ಸ್ಮಾರ್ಟ್‌ಫೋನ್ 3D ಮ್ಯಾಗ್ನೆಟಿಕ್ ಪಾರ್ಟಿಕಲ್(3d magnetic particle) ವಿನ್ಯಾಸವನ್ನು ಬಣ್ಣ-ಬದಲಾಯಿಸುವ ಬ್ಯಾಕ್ ಪ್ಯಾನೆಲ್ (colour changing back pannel) ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಡೈನಾಮಿಕ್ ಬಾರ್(Dynamic bar)  ಅಧಿಸೂಚನೆಗಳೊಂದಿಗೆ 90Hz ಡಿಸ್ಪ್ಲೇಯನ್ನು ನೀಡುತ್ತದೆ. ಬನ್ನಿ ಹಾಗಾದರೆ ಅದರ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.

Itel S24: ಬೆಲೆ, ಲಭ್ಯತೆ :

itel S24 ಮೂರು ಕಾನ್ಫಿಗರೇಶನ್ ಆಯ್ಕೆಗಳನ್ನು(3 configration choice) ಹೊಂದಿದೆ – 4GB + 128GB, 8GB + 128GB, ಮತ್ತು 8GB + 256GB. itel S24 ನ ಬೆಲೆಯನ್ನು(Price) ಇನ್ನೂ ಬಹಿರಂಗಪಡಿಸಿಲ್ಲ. ಈ ಸ್ಮಾರ್ಟ್ ಫೋನ್ ಶೀಘ್ರದಲ್ಲೇ ದಕ್ಷಿಣ ಆಫ್ರಿಕಾದ ಮಾರುಕಟ್ಟೆಗಳಲ್ಲಿ ತನ್ನ ಪಾದಾರ್ಪಣೆ ಮಾಡಲಿದೆ ಎಂದು ತಿಳಿದು ಬಂದಿದೆ. ಮತ್ತು ಈ ಸ್ಮಾರ್ಟ್ ಫೋನ್ ಭಾರತದಲ್ಲಿ ಹ್ಯಾಂಡ್‌ಸೆಟ್ ಲಭ್ಯತೆಯ ಬಗ್ಗೆ ಯಾವುದೇ ಮಾತುಗಳಿಲ್ಲ, ಇನ್ನೂ ಈ ಸ್ಮಾರ್ಟ್ ಫೋನ್ ಡಾನ್ ವೈಟ್(Don white), ಕೋಸ್ಟ್‌ಲೈನ್ ಬ್ಲೂ (coastline blue) ಮತ್ತು ಸ್ಟಾರ್ರಿ ಬ್ಲ್ಯಾಕ್ (stary black)ಬಣ್ಣಗಳಲ್ಲಿ ಲಭ್ಯವಿರುತ್ತದೆ.

Itel S24  ವಿಶೇಷಣಗಳು(Features):

ಈ ಸ್ಮಾರ್ಟ್ ಫೋನ್ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ನೋಡುವುದಾದರೆ, Itel S24 Android 13-ಆಧಾರಿತ itelOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 480 nits ಗರಿಷ್ಠ ಹೊಳಪು(brightness), ಪಂಚ್-ಹೋಲ್ ನಾಚ್ ಮತ್ತು 90Hz ರಿಫ್ರೆಶ್ ದರದೊಂದಿಗೆ (refresh rate) 6.6-ಇಂಚಿನ HD+ LCD ಡಿಸ್ಪ್ಲೇಯನ್ನು(display) ಹೊಂದಿದೆ. ಇದು MediaTek Helio G91 ಚಿಪ್‌ಸೆಟ್‌ನಿಂದ  8GB LPDDR4x RAM  ಮತ್ತು 256GB eMMC 5.1 ಸಂಗ್ರಹಣೆಯೊಂದಿಗೆ(Storage) ಜೋಡಿಸಲ್ಪಟ್ಟಿದೆ.

ಈ ಸ್ಮಾರ್ಟ್ ಫೋನ್ ಕ್ಯಾಮೆರಾ (Camera) ವಿಷಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ,108MP ಸ್ಯಾಮ್ಸಂಗ್ ISOCELL HM6 f/1.6 ಮುಖ್ಯ ಸಂವೇದಕ(main sensor) ಮತ್ತು QVGA ಆಳ ಸಂವೇದಕವನ್ನು (depth sensor) ಒಳಗೊಂಡಂತೆ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು (dual back camera setup) ಹೊಂದಿದೆ. ಮುಖ್ಯ ಸಂವೇದಕವು 3x ಇನ್-ಸೆನ್ಸರ್ ಜೂಮ್(in sensor zoom) ಮತ್ತು EIS ಬೆಂಬಲವನ್ನು ಹೊಂದಿದೆ. ಸೆಲ್ಫಿಗಾಗಿ (For selfie) ಮುಂಭಾಗದಲ್ಲಿ 8MP ಸಂವೇದಕವಿದೆ.

ಇನ್ನೂ ಇತರೆ ಫೀಚರ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ, ಸ್ಮಾರ್ಟ್‌ಫೋನ್ ಡೈನಾಮಿಕ್ ಬಾರ್ (dynamic bar) ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.ಈ ಸ್ಮಾರ್ಟ್ ಫೋನ್ 18W ವೇಗದ ಚಾರ್ಜಿಂಗ್‌ನೊಂದಿಗೆ(charging)  5000mAh ಬ್ಯಾಟರಿಯನ್ನು ಪ್ಯಾಕ್(battery pack)  ಮಾಡುತ್ತದೆ. ಮೊನೊ ಸ್ಪೀಕರ್(monospeaker), USB-C ಪೋರ್ಟ್, 3.5mm  ಹೆಡ್‌ಫೋನ್  ಜ್ಯಾಕ್ (head phone jack), ಬ್ಲೂಟೂತ್ v5.0, 2.4Ghz Wi-Fi, GPS ಮತ್ತು  4G  VoLTE ಜೊತೆಗೆ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸಂವೇದಕ(side facing fingerprint sensor) ಹೊಂದಿದೆ.

ಇನ್ನೂ ಕೊನೆಯದಾಗಿ Itel S24 ಸ್ಮಾರ್ಟ್ ಫೋನ್ ನಮ್ಮ ಭಾರತದಲ್ಲಿ ಲಭ್ಯವಿರುತ್ತದೆಯೋ ಇಲ್ಲವೋ ಎಂದು ತಿಳಿಯುವುದಾದರೆ, Itel S24 ಸ್ಮಾರ್ಟ್ ಫೋನ್ ಭಾರತಕ್ಕೆ ಬರುತ್ತದೆ ಎಂಬುದನ್ನು Itel ಅಧಿಕೃತವಾಗಿ ಏನನ್ನು ದೃಢಪಡಿಸಿಲ್ಲ. ಆದರೆ ಬ್ರ್ಯಾಂಡ್ (brand) ತನ್ನ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಬಿಡುಗಡೆ ಮಾಡುವುದನ್ನು ಪರಿಗಣಿಸಿದರೆ ಮತ್ತು ಇದು ಕಳೆದ ವರ್ಷ S23+ ಸ್ಮಾರ್ಟ್ ಫೋನ್ ಅನ್ನು ಸಹ ಬಿಡುಗಡೆ ಮಾಡಿ ರುವುದನ್ನು ನೋಡಿದರೆ, ಭವಿಷ್ಯದಲ್ಲಿ ಕೆಲವು ಹಂತದಲ್ಲಿ itel S24 ಸ್ಮಾರ್ಟ್ ಫೋನ್ ಭಾರತಕ್ಕೂ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು. ಮತ್ತು ಇಂತಹ ಉತ್ತಮವಾದ  ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

WhatsApp Group Join Now
Telegram Group Join Now

About

Leave a Reply

Your email address will not be published. Required fields are marked *