Home » Govt Schemes » RTE Application 2024 : ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ LKG & 1ನೇ ಕ್ಲಾಸ್ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

RTE Application 2024 : ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ LKG & 1ನೇ ಕ್ಲಾಸ್ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

WhatsApp Group Join Now
Telegram Group Join Now

2024-25ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (RTE Admission 2024-25) ಮೂಲಕ ಉಚಿತವಾಗಿ ಪ್ರವೇಶಕ್ಕೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಇನ್ನು ಕೇವಲ 23  ದಿನಗಳು ಮಾತ್ರ ಬಾಕಿ ಉಳಿದಿವೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳೆಗೆ ಅರ್ಜಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ತಿಳಿಸಿದೆ.

RTE Admission 2024

ಕರ್ನಾಟಕ ರಾಜ್ಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳು ಎಲ್ಲಿ ಇರುವುದಿಲ್ಲವೋ ಅಥವಾ ವಿದ್ಯಾರ್ಥಿಗಳ ಪ್ರದೇಶದಲ್ಲಿ ಇರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮೂಲಕ ಉಚಿತವಾಗಿ ಪ್ರವೇಶ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ ಅಗತ್ಯವಾಗಿ ಬೇಕು.

ಮಗುವಿನ ವಯಸ್ಸು ಎಸ್ಟಿರಬೇಕು?

– LKG ಪ್ರವೇಶ ಪಡೆಯಲು, ಮಗುವಿಗೆ ಕನಿಷ್ಠ 4 ವರ್ಷ ತುಂಬಿರಬೇಕು.

– 1ನೇ ತರಗತಿಗೆ ಪ್ರವೇಶ, ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಮತ್ತು ಗರಿಷ್ಠ 7 ವರ್ಷ ವಯಸ್ಸಾಗಿರುತ್ತದೆ.

2024-25ನೇ ಸಾಲಿಗೆ ಆರ್‌ಟಿಇ ಪ್ರವೇಶ ವೇಳಾಪಟ್ಟಿ:

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 22-04-2024
  • ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ : 26-04-2024
  • ಆನ್‌ಲೈನ್‌ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಬಿಡುಗಡೆ : 30-04-2024
  • ಮೊದಲ ಸುತ್ತಿನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ  ಶಾಲೆಗಳಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ : 13-05-2024
  • ಆನ್‌ಲೈನ್‌ ನಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ಬಿಡುಗಡೆ ದಿನಾಂಕ : 22-05-2024

ಅರ್ಜಿ ಸಲ್ಲಿಸುವುದು ಹೇಗೆ?

ಆರ್‌ಟಿಇ ಮೂಲಕ ಪ್ರವೇಶಕ್ಕೆ ಅರ್ಜಿ ಹಾಕಲು ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಳ್ಲಿ ಕರ್ನಾಟಕ-ಒನ್, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್-ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹಂತ 1: ಮೊದಲಿಗೆ,  RTE ಕರ್ನಾಟಕದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಹಂತ 2: RTE ಕರ್ನಾಟಕ ಪ್ರವೇಶ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಹಂತ 3: ಅರ್ಜಿ ನಮೂನೆಯು ಪರದೆಯ ಮೇಲೆ ತೆರೆಯುತ್ತದೆ

ಹಂತ 4:ಈಗ, ಅಗತ್ಯವಿರುವ ಎಲ್ಲಾ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ

ಹಂತ 5: ನಂತರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ

 

 

WhatsApp Group Join Now
Telegram Group Join Now

About

Leave a Reply

Your email address will not be published. Required fields are marked *